28th September 2024
ದುಡಿಮೆ ನ್ಯೂಸ್ ಲೈನ್
ರಾಯಚೂರು,ಸೆ.28-ನಗರದ ರಿಮ್ಸ್ ವೈದ್ಯಕೀಯ ಕಾಲೇಜಿಗೆ ಮರಣಾನಂತರ ದೇಹದಾನ ಹಾಗೂ ನೇತ್ರದಾನ ಮಾಡುವ ಸಂಕಲ್ಪ ಮಾಡಿ ಒಪ್ಪಿಗೆ ಪತ್ರಕ್ಕೆ ಸಹಿ ಮಾಡಿದ ದಂಪತಿಗಳಾದ ಮಾನವಿಯ ಕೋನಾಪುರಪೇಟೆಯ ಕೆ ಪಾರ್ವತಿ ಮತ್ತು ಕೆ ಸಿದ್ದಯ್ಯ ಸ್ವಾಮಿ ನಿವೃತ್ತ ಪ್ರಬಂಧಕರು ಪಿ ಎಲ್ ಡಿ ಬ್ಯಾಂಕ್ ಮಾನವಿ ಅವರನ್ನು ಲಯನ್ಸ್ ಕ್ಲಬ್ ಮಾನವಿ ವತಿಯಿಂದ ಸನ್ಮಾನಿಸಲಾಯಿತು.
ಐಎಂಎ ಮಾನವಿ ಅಧ್ಯಕ್ಷರಾದ ಡಾ. ಶರಣಪ್ಪ, ನಿವೃತ್ತ ಆಯುಷ್ ವೈದ್ಯಾಧಿಕಾರಿಯಾದ ಡಾ. ಚಂದ್ರಶೇಖರ ಸುವರ್ಣಗಿರಿಮಠ, ಲಯನ್ಸ್ ಕ್ಲಬ್ ಕಾರ್ಯದರ್ಶಿಗಳಾದ ಶ್ರೀ ಉಮಾಶಂಕರ್ ಕಲ್ಮಠ, ಪ್ರಸೂತಿ ತಜ್ಞರಾದ ಡಾ. ಪ್ರಜ್ಞಾ ಹರಿಪ್ರಸಾದ್, ನಾಗರಾಜ ಬಳಿಗಾರ, ಎಲ್ಐಸಿಯ ಅಧಿಕಾರಿಗಳಾದ ಮಲ್ಲಿಕಾರ್ಜುನ್ ಬಾಳಿ, ಎ ವೈ ದೇವರಮನಿ , ಕೆ. ಶಂಕರಗೌಡ ಮತ್ತು ದೇವೇಂದ್ರ ದುರ್ಗದ ಉಪಸ್ಥಿತರಿದ್ದರು.
ರಿಮ್ಸ್ ಗೆ ದೇಹದಾನ ಮತ್ತು ನೇತ್ರದಾನ ಒಪ್ಪಿಗೆ ಸೂಚಿಸಿದ ದಂಪತಿಗಳಿಗೆ ಲಯನ್ಸ್ ಕ್ಲಬ್ ನಿಂದ ಸನ್ಮಾನ